Thursday 5 December 2019

ಚೆನ್ನೈ ಡಯಟ್ ಅಧಿಕಾರಿಗಳ ಭೇಟಿ

05.12.2019

 ಮೈಸೂರು ಡಯಟ್ ನ ವಿವರ ನೀಡಿದ ಪ್ರಾಂಶುಪಾಲರು

 ವಸಂತಮಹಲ್ ನ ವಿವಿಧ ವಿಭಾಗಗಳ ಪರಿಚಯ


ಐಸಿಟಿ ತರಬೇತಿಗೆ ಭೇಟಿ

Monday 1 July 2019

ಬ್ಲಾಗಾಯಣ

ಬ್ಲಾಗ್ ಎಂಬುದು ನಮ್ಮ ಮಿನಿ ವೆಬ್ ಸೈಟ್. ಹಣ ಖರ್ಚು ಮಾಡಿ ತನ್ನದೇ ಅಂತರ್ಜಾಲ ಕೇಂದ್ರ ತೆರೆಯಲು ಆಗದ ಸಂದರ್ಭದಲ್ಲಿ, ಈ ಮೇಲ್ ಸಹಾಯದಿಂದ ನಾವು ಅಂತರ್ಜಾಲದ ಜಗತ್ತನ್ನು ತಲುಪುವ ಮಾರ್ಗವಿದು. 

ಇದು ನಮ್ಮ ಇಂದಿನ ದಿನಗಳಲ್ಲಿ ನಮ್ಮೆಲ್ಲಾ ಐಟಿ@ಸ್ಕೂಲ್ ಶಾಲೆಗಳನ್ನು ತಂತ್ರಜ್ಞಾನ ಆಧರಿತ ತಾಣಗಳನ್ನಾಗಿ ಮಾಡಲು ಸರ್ಕಾರ ಮುಂದಡಿಯಿಟ್ಟಿದೆ. ಇದರ ಯತ್ನವಾಗಿ ತರಬೇತಿಗಳು ನಿರಂತರ ನಡೆಯುತ್ತಿವೆ. ಈ ಬೆನ್ನಲ್ಲೇ ಮೈಸೂರಿನ ಟ್ಯಾಲ್ಪ್ ಶಾಲೆಗಳಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ, ಎಲ್ಲಾ ಐಟಿ @ಸ್ಕೂಲ್ ಶಾಲೆಗಳಲ್ಲೂ ಸಹ ಬ್ಲಾಗ್ ಕ್ರಿಯೇಟ್ ಮಾಡಬೇಕೆಂಬ ಆಸೆಯಿಂದ ರಿಫ್ರೆಶರ್ ತರಬೇತಿ ಪಡೆದ ಶಿಕ್ಷಕರಿಗೆ ಅವರವರ ಶಾಲೆಯ ಬ್ಲಾಗ್ ರಚಿಸಿ, ಅದಕ್ಕೆ ಅಪ್ ಲೋಡ್ ಮಾಡುವ ಬಗ್ಗೆಯನ್ನು ಹೇಳುತ್ತಿದ್ದೇವೆ. 


ಜಿಲ್ಲೆಯ 232 ಶಾಲೆಗಳಲ್ಲೂ ಬ್ಲಾಗ್ ರಚಿಸಿ ಅದರ ಒಂದು ಸಮೂಹವನ್ನು ಸೃಜಿಸಬೇಕೆಂಬುದು ನಮ್ಮ ವಸಂತಯಾನದ ಬಯಕೆ. ಹೀಗಾಗಿಯೇ ಹಲವು ಶಾಲೆಗಳಲ್ಲಿ ಈಗಾಗಲೇ  ಬ್ಲಾಗ್ ರಚಿಸಿ ಆಗಿದೆ. ಆದರೆ ಕೆಲವು ಬ್ಲಾಗ್ ಗಳನ್ನು ನಮ್ಮ ಟ್ಯಾಲ್ಪ್ ತರಬೇತಿ ಪಡೆದ ಸೃಜನಶೀಲ ಶಿಕ್ಷಕರು ಅಪ್‍ಡೇಟ್‍ ಮಾಡುತ್ತಿದ್ದು, ಅದರ ಕೆಲವು ಚಿತ್ರಣಗಳು ಇಲ್ಲಿವೆ.
ಸರ್ಕಾರಿ ಪ್ರೌಢಶಾಲೆ, ಧರ್ಮಾಪುರ , ಹುಣಸೂರು ತಾ. ಮೈಸೂರು ಜಿಲ್ಲೆ 




Saturday 8 June 2019

ಬದಲಾದ ಶಾಲೆ ಸ್ವರೂಪ

ಇದು ಕಟ್ಟೆ ಮಳಲವಾಡಿ ಶಾಲೆ. ಶಾಲೆ ಬದಲಾಗಿದೆ. ಬದಲಾವಣೆಗೆ ನಾಂದಿ ಹಾಡಿದೆ.



ನಾಳೆಗಳು ನಮ್ಮದು

ನಿಮ್ಮ_ಕಸ_ನಿಮಗೆ 
" ಆತ್ಮೀಯ ಶಿಕ್ಷಕ ಮಿತ್ರರೆ, ನಿಮ್ಮ ನಿಮ್ಮ ಶಾಲೆಗಳಲ್ಲಿ ಮಕ್ಕಳ ಮೂಲಕ ಪ್ಲಾಸ್ಟಿಕ್ ಕವರುಗಳನ್ನ ಕಂಪೆನಿಗಳಿಗೆ ವಾಪಾಸು ಕಳಿಸಿ. "ನೀವು ಉತ್ಪಾದಿಸಿದ ಕಸವನ್ನು ನೀವೇ ಮರುಬಳಕೆ ಮಾಡಿ" ಎಂದು  ಒಕ್ಕಣೆಯಿಟ್ಟು ಒತ್ತಾಯಿಸೋಣ.  ವ್ಯಾಪಾರದ ಹೆಸರಲ್ಲಿ ಉತ್ಪಾದಿಸುವ ಅಗಾಧ ಪ್ರಮಾಣದ ಕಸದ ಅರಿವು ಅವರಿಗೆ ಆಗಲಿ." 

 "ಉತ್ಪಾದನೆ ಅವ್ಯಾಹತವಾಗಿ ನಡೆದು, ನಾವಿಲ್ಲಿ ಕಡಿಮೆ ಬಳಸೋಣ, ಮರುಬಳಕೆ ಮಾಡೋಣ ಎಂದು ಗಿಣಿಪಾಠ ಹೇಳಿದರೆ ಉಪಯೋಗವಿಲ್ಲ. ಆಯಾಯ ಕಂಪೆನಿಗಳ ಪ್ಲಾಸ್ಟಿಕ್ ಕಸಕ್ಕೆ ಅವರೇ ವಾರಸುದಾರರು. ಅದನ್ನ ಅವರಿಗೆ ಮನವರಿಕೆ ಮಾಡಿಕೊಡೋಣ. ನಾಳೆಗಳು ನಮ್ಮ ಮಕ್ಕಳದ್ದು. ಆ ನಾಳೆಯನ್ನು ಪ್ಲಾಸ್ಟಿಕ್ ತ್ಯಾಜ್ಯ ತುಂಬಿ, ಹವಾಮಾನ ಕೆಡಿಸಿ ಉಡುಗೊರೆ ನೀಡುವುದೆ? 

ಮಕ್ಕಳ ನ್ನು ಜಾಗೃತರನ್ನಾಗಿಸೋಣ. ನಾಳೆಯಿಂದ ನಿರಂತರ ಪ್ಲಾಸ್ಟಿಕ್ ರಾಕ್ಷಸರನ್ನ ಎಚ್ಚರಿಸೋಣ. ನಾವು ಕಸವನ್ನು ಕಳಿಸುತ್ತಿದ್ದೇವೆ ನೀವೂ ಕಳಿಸಿ. " --( ಬರಹ : ಸಂತೋಷಗುಡ್ಡಿಯಂಗಡಿ ಯವರ ಫೇಸ್ ಬುಕ್ ಪೇಜ್ ನಿಂದ ಪಡೆದದ್ದು)



ಹೀಗೆ ಒಂದು ಜಾಗತಿಕ ಸಮಸ್ಯೆಗೆ ಸವಾಲೆಸಿದಿರುವ ಮಕ್ಕಳು ನಂಜನಗೂಡಿನವರು. ಇಲ್ಲಿನ ಹೆಗ್ಗಡಹಳ್ಳಿ ಸರ್ಕಾರಿ ಶಾಲೆಯವರು. ಮಕ್ಕಳೆಂಬ ಮೊಗ್ಗಿನಲ್ಲೇ ಈ ಕೃಷಿ ಮಾಡುತ್ತಿರುವುದು ಇಲ್ಲಿನ ರಂಗ ಶಿಕ್ಷಕರಾದ ಸಂತೋಷ್ ಗುಡ್ಡಿಯಂಗಡಿ ಎಂಬ ಮೇಷ್ಟ್ರು. ಸದಾ ಹೊಸತನದ ಹುಡುಕಾಟದಲ್ಲೇ ಇರುವ ಇವರಿಗೆ ಶಾಲೆಯ ಎಲ್ಲ ಸಹೋದ್ಯೋಗಿಗಳ ಸಾಥ್ ಇದೆ. ಜೊತೆಗೆ ಮಕ್ಕಳ ಸಂಪೂರ್ಣ ತೊಡಗಿಸಿಕೊಳ್ಳುವಿಕೆ ಶಾಲೆಯನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.

Wednesday 10 April 2019

ಮುದ್ದು ಮುದ್ದು ಮುದ್ದನಹಳ್ಳಿ



 ಅಡಿಗಡಿಗೂ ಕಲಿಕೆ. ಹೆಜ್ಜೆ ಹೆಜ್ಜೆಯೂ ವಿಶೇಷ. ಇಲ್ಲಿನ ಪರಿಮಳದ ಘಮಲು ಊರಿಗೆಲ್ಲಾ ಪ್ರೇರಣೆ. ಅಲ್ಲಾ ಅಲ್ಲಾ ತಾಲೂಕು, ಜಿಲ್ಲೆಯ ಗಡಿ ದಾಟಿ, ನೆರೆ ಹೊರೆ ಜಿಲ್ಲೆಗೂ ಪ್ರೇರಣೆ ಆಗಿದೆ. ರಾಜ್ಯಮಟ್ಟದ ವೇದಿಕೆಗಳಲ್ಲಿ ಚರ್ಚೆ ಆಗುತ್ತಿದೆ.

ಇಂತಹ ವಿಶೇಷತೆಗಳೇನು ಎಂದು ಎಣಿಸುತ್ತಿದ್ದೀರಾ. ಅದನ್ನೇ ಹೇಳುವ ಅಂತ  ಈ ಬ್ಲಾಗ್ ಬರಹ ನಿಮ್ಮ ಮುಂದೆ ಇಡುತ್ತಿದ್ದೇವೆ. ಇಲ್ಲಿ ಅವುಗಳನ್ನು ಒಂದೊಂದಾಗಿ ಹೇಳುವ ಎಂದೆನಿಸಿದೆ.


ದಾಖಲಾತಿ ದಾಖಲೆಗಾಗಿ



ಊರ ಪಟೇಲ್ರು, ಶ್ಯಾನುಭೋಗರು, ಗೌಡತಿಯಮ್ಮನೋರು, ಧುರೀಣರು, ಎಲ್ಲ ಪಂಚೆ ಸೀರೆ ಉಟ್ಟು ಕಂಗೊಳಿಸಿದ್ದೇ ಕಂಗೊಳಿಸಿದ್ದು. ಇದೇನಿದು ಊರ ಮಕ್ಕಳೆಲ್ಲ ಹೀಗೆ ಮಿರಿ ಮಿರಿ ಮೀಂಚತಾವ್ರೆ ಅಂತ ನೋಡಿದ್ರೆ ಅದು ನಮ್ಮೂರ ಶಾಲೆಗಾಗಿ ನಡೆದ ವಿನೂತನ ಪ್ರಯತ್ನ…

ಹುಣಸೂರು. ಗಂಧದಬೀಡು. ಸಿಂಗಮಾರನಹಳ್ಳಿ ಹಲವು ವಿಶೇಷತೆಗಳಿಗೆ ನಾಂದಿ ಹಾಡಿರುವ ಕ್ಲಸ್ಟರ್. .ಇಲ್ಲಿರುವ ದೇವಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತನ್ನದೇ ವೈಶಿಷ್ಟ್ಯಪೂರ್ಣ ಚಟುವಟಿಕೆಗಳಿಂದ ತನ್ನ ಛಾಪು ಮೂಡಿಸುತ್ತಲೇ ಇದೆ. ಶಾಲೆಯ ಚಟುವಟಿಕೆಗಳಲ್ಲಿ ವಿಶೇಷತೆ, ಬೋಧನೆಯಲ್ಲಿ ತಾಂತ್ರಿಕತೆ, ಇಡುವ ಪ್ರತಿ ಹೆಜ್ಜೆಯೂ ಸಹ ವಿನೂತನವಾಗಿಯೇ ಇಡಲು ಪ್ರಯತ್ನಿಸುವ ಇಲ್ಲಿನ ಶಿಕ್ಷಕರ ತಂಡ ಈಗಾಗಲೇ ದಾಖಲಾತಿಗಾಗಿ ಹಲವು ವಿನೂತನ ಪ್ರಯತ್ನಗಳನ್ನು ಮಾಡುತ್ತಿದೆ.


Friday 5 April 2019

ಥರ ಥರ ಭೀತಿ ಹೋಗಲಾಡಿಸಿದ ತರಬೇತಿ


ಡಯಟ್ ಮೈಸೂರಿನಲ್ಲಿ ನಡೆದ ವಿವಿಧ ತರಬೇತಿಯ ಚಿತ್ರಣಗಳು



Saturday 16 March 2019

ಇಟಿ ಭಾವ ಮೀಟಿ

ಇಟಿ. ಎಜುಕೇಷನ್ ಟೆಕ್ನಾಲಜಿ. ಡಯಟ್ ನ ಪ್ರಮುಖ ಅಂಗ. ಪ್ರಸ್ತುತ ಕೃತಕ ಬುದ್ಧಿಮತ್ತೆಯ ಕಾಲಘಟ್ಟದಲ್ಲಿ ಹೆಚ್ಚು ಪ್ರಸ್ತುತವೂ, ಹೆಚ್ಚು ಸ್ತ್ಯುತ್ಯರ್ಹವೂ, ಹೆಚ್ಚು ಕ್ರಿಯಾಶೀಲವೂ ಆಗಿರಬೇಕಾದ ವಿಭಾಗವಿದು. ಈ ವಿಭಾಗದಲ್ಲಿ ಪ್ರಸ್ತುತ ಕಂಪ್ಯೂಟರ್  ಆಧರಿತ ಕಲಿಕಾ ಬೋಧನೆ ಯೋಜನೆ ಜಾರಿಗೊಳಿಸುವ ಮಹತ್ವದ ಕೆಲಸ ನಿರ್ವಹಣೆ ಆಗುತ್ತಿದೆ. ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಲ್ಲಿಯೂ ಐಟಿ@ಸ್ಕೂಲ್/ಟ್ಯಾಲ್ಪ್ ಯೋಜನೆ ಜಾರಿಗೊಳಿಸಲು ನಿರಂತರ ತರಬೇತಿಗಳನ್ನೂ ಸಹ  ಈ ವಿಭಾಗದಿಂದ ನಡೆಸಲಾಗುತ್ತಿದೆ.







ಈ ತರಬೇತಿಗಳ ಸ್ವರೂಪ, ತರಬೇತಿಗಳು ಸಾಗಿ ಬಂದ ಹಾದಿ, ತರಬೇತಿಗಳ ಮೂಲಕ ಶಾಲೆಗಳೊಂದಿಗೆ ಡಯಟ್ ಹಾಡುತ್ತಿರುವ ಡುಯೆಟ್, ಇತ್ಯಾದಿ ಅಂಶಗಳನ್ನೇ ಆಧರಿಸಿ, ಅಂದರೆ ನಾವಿನ್ಯಯುತ ಅಂಶಗಳನ್ನು ಒಂದೆಡೆ ದಾಖಲಿಕರಿಸುವ ನಿಟ್ಟಿನಲ್ಲಿ ಈ ಬ್ಲಾಗ್ ಮೂಲಕ ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಪ್ರಸ್ತುತ ಈ ಮೊದಲ ಬರವಣಿಗೆಯಲ್ಲಿ ತರಬೇತಿಗಳ ಮೆರವಣಿಗೆ ನಡೆಯಲಿದೆ. ಅರ್ಥಾತ್ ತರಬೇತಿಗಳ ಕುರಿತಾದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದೇವೆ.2018-19ನೇ ಸಾಲಿನಲ್ಲಿ ನಡೆದ 6 ರಿಫ್ರೆಶರ್ ತರಬೇತಿಗಳು, 4 ಇಂಡಕ್ಷನ್ ತರಬೇತಿಗಳ ಯು ಟೂಬ್ ಲಿಂಕ್ ಜೊತೆಗೆ ವಿಡಿಯೋಗಳನ್ನು ನೀವಿಲ್ಲಿ ವೀಕ್ಷಿಸಬಹುದು. DIET MYSURU TALP ಎಂದು ಕ್ಲಿಕ್ಕಿಸಿದರೆ ನಿಮಗೆ ನಮ್ಮ ತರಬೇತಿಯ ವಿಡಿಯೋಗಳು ಲಭ್ಯವಾಗಲಿವೆ.