Saturday 8 June 2019

ನಾಳೆಗಳು ನಮ್ಮದು

ನಿಮ್ಮ_ಕಸ_ನಿಮಗೆ 
" ಆತ್ಮೀಯ ಶಿಕ್ಷಕ ಮಿತ್ರರೆ, ನಿಮ್ಮ ನಿಮ್ಮ ಶಾಲೆಗಳಲ್ಲಿ ಮಕ್ಕಳ ಮೂಲಕ ಪ್ಲಾಸ್ಟಿಕ್ ಕವರುಗಳನ್ನ ಕಂಪೆನಿಗಳಿಗೆ ವಾಪಾಸು ಕಳಿಸಿ. "ನೀವು ಉತ್ಪಾದಿಸಿದ ಕಸವನ್ನು ನೀವೇ ಮರುಬಳಕೆ ಮಾಡಿ" ಎಂದು  ಒಕ್ಕಣೆಯಿಟ್ಟು ಒತ್ತಾಯಿಸೋಣ.  ವ್ಯಾಪಾರದ ಹೆಸರಲ್ಲಿ ಉತ್ಪಾದಿಸುವ ಅಗಾಧ ಪ್ರಮಾಣದ ಕಸದ ಅರಿವು ಅವರಿಗೆ ಆಗಲಿ." 

 "ಉತ್ಪಾದನೆ ಅವ್ಯಾಹತವಾಗಿ ನಡೆದು, ನಾವಿಲ್ಲಿ ಕಡಿಮೆ ಬಳಸೋಣ, ಮರುಬಳಕೆ ಮಾಡೋಣ ಎಂದು ಗಿಣಿಪಾಠ ಹೇಳಿದರೆ ಉಪಯೋಗವಿಲ್ಲ. ಆಯಾಯ ಕಂಪೆನಿಗಳ ಪ್ಲಾಸ್ಟಿಕ್ ಕಸಕ್ಕೆ ಅವರೇ ವಾರಸುದಾರರು. ಅದನ್ನ ಅವರಿಗೆ ಮನವರಿಕೆ ಮಾಡಿಕೊಡೋಣ. ನಾಳೆಗಳು ನಮ್ಮ ಮಕ್ಕಳದ್ದು. ಆ ನಾಳೆಯನ್ನು ಪ್ಲಾಸ್ಟಿಕ್ ತ್ಯಾಜ್ಯ ತುಂಬಿ, ಹವಾಮಾನ ಕೆಡಿಸಿ ಉಡುಗೊರೆ ನೀಡುವುದೆ? 

ಮಕ್ಕಳ ನ್ನು ಜಾಗೃತರನ್ನಾಗಿಸೋಣ. ನಾಳೆಯಿಂದ ನಿರಂತರ ಪ್ಲಾಸ್ಟಿಕ್ ರಾಕ್ಷಸರನ್ನ ಎಚ್ಚರಿಸೋಣ. ನಾವು ಕಸವನ್ನು ಕಳಿಸುತ್ತಿದ್ದೇವೆ ನೀವೂ ಕಳಿಸಿ. " --( ಬರಹ : ಸಂತೋಷಗುಡ್ಡಿಯಂಗಡಿ ಯವರ ಫೇಸ್ ಬುಕ್ ಪೇಜ್ ನಿಂದ ಪಡೆದದ್ದು)



ಹೀಗೆ ಒಂದು ಜಾಗತಿಕ ಸಮಸ್ಯೆಗೆ ಸವಾಲೆಸಿದಿರುವ ಮಕ್ಕಳು ನಂಜನಗೂಡಿನವರು. ಇಲ್ಲಿನ ಹೆಗ್ಗಡಹಳ್ಳಿ ಸರ್ಕಾರಿ ಶಾಲೆಯವರು. ಮಕ್ಕಳೆಂಬ ಮೊಗ್ಗಿನಲ್ಲೇ ಈ ಕೃಷಿ ಮಾಡುತ್ತಿರುವುದು ಇಲ್ಲಿನ ರಂಗ ಶಿಕ್ಷಕರಾದ ಸಂತೋಷ್ ಗುಡ್ಡಿಯಂಗಡಿ ಎಂಬ ಮೇಷ್ಟ್ರು. ಸದಾ ಹೊಸತನದ ಹುಡುಕಾಟದಲ್ಲೇ ಇರುವ ಇವರಿಗೆ ಶಾಲೆಯ ಎಲ್ಲ ಸಹೋದ್ಯೋಗಿಗಳ ಸಾಥ್ ಇದೆ. ಜೊತೆಗೆ ಮಕ್ಕಳ ಸಂಪೂರ್ಣ ತೊಡಗಿಸಿಕೊಳ್ಳುವಿಕೆ ಶಾಲೆಯನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.

No comments:

Post a Comment